Sunday, July 28, 2013

ತಂತ್ರಜ್ಞ-ಯಾನ

(ಇದು ಕಾಲ್ಪನಿಕ ಮಾತ್ರ .. ಆದ್ರೆ ತಮ್ಮ ಹಳೆ ಜೀವನದ ಬಗ್ಗೆ ಯೋಚಿಸ್ತಿರೋಕೆಲವು  techies ಗಳಲ್ಲಿ ಈ ತರ ಭಾವನೆ ಬರೋದು ಮಾತ್ರ  ಸತ್ಯ )...
 ...
.....
...

....


ಅದೊಂದು  ಸುಂದರವಾದ ಮುಂಜಾನೆ ,"ಬೆಂದಕಾಳೂರಿನ outskirts ಮತ್ತೆ costly area "ಎಂದು ಹೇಳ್ತಿರು ಆ ಲೇಔಟ್ ಅಲ್ಲಿ ಸಿಗ್ನಲ್ ಬಿಡೋದನ್ನ ಕಾಯ್ತಾ ಇರ್ವಾಗ  ಒಬ್ಬ ಡಿಗ್ರಿ ಮುಗಿಸಿದ ಯುವಕ ತನ್ನ resume file ನೊಂದಿಗೆ  tip top ಆಗಿ..  ಭಯ, ಅವಸರದಿಂದ ರಸ್ತೆ ದಾಟುತ್ತ ಇದ್ದ ದೃಶ್ಯ correct ಆಗಿ  ಕಂಡ್ತಾ ಇತ್ತು  .








                                                                                                                                  ...

...

...

...

 ಎಲ್ಲಿಂದಲೊ Flash back ಅವಾಗ  ಮನಸ್ಸಿಗೆ ಬಂತು...

..

...

...

ಬೆಂಗಳೂರು.  ಅಲ್ಲಿ ನಿನ್ skill ಗೆ ಒಳ್ಳೆ job ಸಿಕ್ಕೆ ಸಿಗುತ್ತೆ ಬಿಡು ಗುರು ಅಂತ ನಮ್ ದೋಸ್ತ ಯಾವಾಗ್ಲೂ ಹೇಳ್ತಿದ್ದ,ಎಲ್ಲೋ ಒಂದು ಕಡೆ ಕಾಲೇಜ್ ಟೈಮ್ ಅಲ್ಲಿ ಮಾಡ್ತಿದ್ದ effort ಗಳು ಯಾಕೋ waste ಅನ್ಸ್ಬಿಟ್ಟಿದ್ವು . ಆ night out  ಗಳು,  ಬೇಡ ಅಂದ್ರು ಲೆಕ್ಚರರ್ ಗಳಿಗೆ  sincere ಅಂತ ತೊರ್ಸ್ಕೊತಿದ್ದ ದಿನಗಳು,exam ನಲ್ಲಿ ಒಳ್ಳೆ ಮಾರ್ಕ್ಸ್ಗಾಗಿ ಪರಿ ಪರಿಯಾಗಿ ಮಾಡ್ತಿದ್ದ ಪ್ರಯತ್ನಗಳು  ಎಲ್ಲ ಒಂದೇ ಸಮಯಕ್ಕೆ change ಆಗ್ಬಿಟ್ವು .

ಎಲ್ಲೋ ನಮ್ ದೊಡ್ಡವರು ಒಂದ್ ಮಾತ್  ಹೇಳಿದ್ರು "ಗುರುವಿನ ಗುಲಾಮ ಆಗೋ ತನಕ ದೊರೆಯುವದಿಲ್ಲ  ಮುಕ್ತಿ " ಅಂತ  ಸಧ್ಯ ನಾವು ಗುಲಾಮ ಅಗ್ಬಿಟ್ವಿ. ತತ್ವ  ಸಿದ್ದಾಂತ ಒಂದೊಂದ್ಸಲ ಒಳ್ಳೆದನ್ಸುತ್ತೆ ಆದ್ರೆ ಅಧ್ನ follow ಮಾಡೋಕ್ ಮಾತ್ರ ಆಗಲ್ಲಾರಿ ...

ಕಾಲೇಜ್ ಅಲ್ಲೇನೋ ಕಂಪನಿ ಗಳು ಬಂದವು,  ನಾಳೆ ನಾನು ಒಂದಲ್ಲಾ ಒಂದು  ಕಂಪನಿ ಲಿ ವರ್ಕ್ ಮಾಡ್ತೀನಿ ಅಂತ ಒಳ ಮನಸ್ಸು ಹೇಳ್ತಾ ಇತ್ತು .. ಆದ್ರೆ ಗುರು  "interview easily clear" ಮಾಡೋಕಾಗುತ್ತೆ  ಅನ್ನೋ ವಿಷ್ಯ ಮಾತ್ರ ತಪ್ಪಾಯ್ತು.

aptitude ಬರ್ದ್ವಿ  answer correct  ಆಗಿದ್ಕಿಂತ ತಪ್ಪಾಗಿದ್ದೆ  ಜಾಸ್ತಿ ,ನನ್ನ ನಾ defend ಮಾಡೋಕೆ  out  of syllabus ಅಂತ ಹೆಳ್ಕೊಂಡೆ ,ಆದ್ರೆ ಓದದೇ   ಬರ್ದೇ ಇರೋದು ,so  called "known"  ಮಿಸ್ಟೇಕ್ ಆಗಿತ್ತು.

placement process  ಏನೋ ಸ್ಮೂತ್ ಆಗಿ ಹೋಗ್ತಾ ಇತ್ತು , ಎಲ್ಲೋ ನಮ್ ಹೆಸ್ರು selected list  ಅಲ್ಲಿ ಎಲ್ಲು  ಬರ್ಲಿಲ್ಲ, ಬಿಡು  ಗುರು next ಕಂಪನಿ ಗೆ ಟ್ರೈ ಮಾಡೋಣ  ಅಂತ  ಸಮಾಧಾನ ಮಾಡ್ಕೊಂಡೆ.

 ಈ  ತರ ತುಂಬಾ ಕಂಪನಿ ಗಳು ಬಂದವು,ಕೊನೆ round ತಂಕ ಹೋಗೊ capacity ಹಂತ ಹಂತ ವಾಗಿ ಬಂದವು ಆದ್ರೆ ಹಾಳಾದ್ದು ಈ HR ಇಂಟರ್ವ್ಯೂ ನೆ full torture ಆಗ್ತಿತ್ತು . ಕ್ಲಾಸ್ ಅಲ್ಲಿ ಎಲ್ರು job holders ಅನ್ಸ್ಕೊಂಡಿದ್ರು ಆದ್ರೆ ನಾನ್ಮಾತ್ರ ಎಲ್ಲಾ efforts ಮಾಡಿ ಎನೂ ಇಲ್ದೆ ಇರೋ ಹಂಗೆ ಆಗ್ಬಿಟ್ಟಿದ್ದೆ ....
.. 
.....
ಹಾಗೆ ಹೀಗೆ ಮಾಡಿ ಆ ವರ್ಷ ಮುಗ್ದಿತ್ತು....  ಡಿಗ್ರಿ ನಮ್ ಕಯ್ಯಲ್ಲಿತ್ತು.

 ...

..

...ಕೆಲ್ಸ ಬೇಕಾದ ಕಾರಣ ,ಅನಿವಾರ್ಯವಾಗಿ  ಬೆಂಗಳೂರು ನನ್ನ  ಕೈ ಬಿಸಿ ಕರ್ದಿತ್ತು

..

..

ಜಾಬ್ ಹುಡ್ಕೋ ವಿಷಯದಲ್ಲಿ ನಾವು ಬಚ್ಚಾಗಳಗಿದ್ವಿ.. ಕಂಪನಿ ಗಳಲ್ಲಿ openings ಗಳಿವೆ ಅಂದಾಗ ಹೆಂಗಾದ್ರೂ ಹೋಗಿ attend ಮಾಡಿ ಬರೋದು ಒನ್ದ್ತರ  routine ಆದಂಗಾಗೊಯ್ತು ,ಹೋಗ್ತಾ ಹೋಗ್ತಾ ಬೆಂಗಳೂರು ನ ಗಲ್ಲಿ ಗಳು common areas ಆಗೋದ್ವು ...

 life ಒಂದತರ ನಿಂತ  ನೀರಾಗೊಯ್ತು ,ಕೆಲಸ ಒಂದಲ್ಲ ಒಂದಿನ ಸಿಗುತ್ತೆ ಅನ್ನೋ ಭರವಸೆಯೇ ನಮಗೆ ಖುಷಿ ಕೊಡೊ ವಿಚಾರವಾಯಿತು ...

 ..

... ...

 ..

ಕತ್ಲೆ  ಆದ್ಮೇಲೆ ಬೆಳ್ಕು  ಬರ್ಲೇ ಬೇಕಲ್ಲ .. ಆ ದಿನ ಬಂದೆ ಬಿಡ್ತು...   MNC ಲಿ  ಕೆಲಸ ಸಿಕ್ತು .. ಮರಭೂಮಿ ಲಿ ಓಯಸಿಸ್ ಸಿಕ್ದಂಗ್ ಆಯ್ತು ನೋಡಿ ..cloud 9 ಅಲ್ಲೇ ಇದ್ದೇ  ಅನ್ಸುತ್ತೆ :)..

MNC ಅಂದ್ರೆ ಕೇಳ್ಬೇಕಾ .. ಅವರದ್ದೇ ತರಹೆ ವಾರಿ ರೂಲ್ಸ್ ಗಳು..ಎಲ್ಲ ಮೊದ್ ಮೊದ್ಲು ಕಷ್ಟ ಆದವು ಆದ್ರೆ ಅವೇ ರೂಢಿ ಆಗೋಯ್ತು . ಮೊದ್ಲಿನ್ದಾನು ಆದಷ್ಟು ಕನ್ನಡ ದಲ್ಲೇ ಮಾತಾಡೋದ್ ಇಷ್ಟ ಕಣ್ರೀ ..  ಕನ್ನಡದವರು ಕಂಡ್ರೆ ಅವರು  ಇಂಗ್ಲಿಷ್ ಅಲ್ಲಿ ಮಾತಡ್ಸ್ರು ಆದಷ್ಟು ಕನ್ನಡದಲ್ಲೇ  ಮಾತಾಡೋನು ನಾನು ..

ಕೆಲಸ ಚೆನ್ನಾಗಿ ನಡೀತಾ ಇತ್ತು  .. ಹೋಗ್ತಾ ಹೋಗ್ತಾ ೫ ವರ್ಷಾನೇ ಕಳ್ದೊಯ್ತು .. ಎಲ್ಲ ಅನುಕೂಲ ಇದ್ರೂ ನಾವೆಲ್ಲೋ ಬೇರೆ ಜಗತ್ತಿನ ದಾಸ್ರಗ್ಬಿಟ್ವಿ ಅನ್ಸ್ತಾ ಇತ್ತು .. college ಅಲ್ಲಿರೋ closeliness  ಆ care  ಇಂದ ತುಂಬಾ ದೂರ ಆಗ್ಬಿಟ್ವಿ ...

ಚೆನ್ನಾಗಿರೋ   ಬಟ್ಟೆ ಕಂಡ್ರು branded clothes ಅಗ್ಬೇಕೆನ್ನೋ boundary ಹಾಕೊಬಿಟಿದ್ವಿ .. ಕೊನೆಗೆ ಅನ್ಸಿದ್ದು "ನಾನು ನಾನಾಗಿರಲಿಲ್ಲ"  ..
... 
ಒಂದ್ ಕಾಲ್ದಲ್ಲಿ  ಮೊಬೈಲ್ ಫೋನ್ ಅಂದ್ರೇನೆ ಗೊತ್ತಿರ್ಲಿಲ್ಲ.. ಈಗ  ಅದಿಲ್ಲಾ ಅಂದ್ರೆ ಒಂದ್  ಕ್ಷಣಾನು ಕಳೆಯಕ್ಕಗಲ್ಲಾ,
Facebook ,twitter ಗಳು ನಮ್ ಜೀವನದ ಅವಿಭಾಜ್ಯ ಅಂಗಗಳೊ ಎಂಬಂತೆ ಆಗೋಗಿದೆ ,ಜನ ಯಾವ್ದೋ virtual world ಅಲ್ಲಿ ತಮ್ಮ fantasy ಹುಡ್ಕ್ತಾ ಇದಾರೆ  ಅನ್ಸ್ಬಿಟ್ಟಿದೆ.. 


 .. ಈ corporate ರೂಲ್ಸ್ ಗಳು ಈ faking smile ಗಳು ನಮ್ಮ ತನವನ್ನು ಬುಡಸಮೇತ ಕೀಳುತ್ತಿದೆ.ಎಲ್ಲವು ದುಡ್ಡಿಗೋಸ್ಕರ ಎಲ್ಲವು ಸ್ವಹಿತಕ್ಕೊಸ್ಕರ ಅನ್ನೋ ಮನೋಭಾವನೆ .. ಬಾಲ್ಯದಿಂದ ಕಲಿತಿದ್ದ "ಕೂಡಿ ಬಾಳಿದರೆ ಸ್ವರ್ಗ ಸುಖ "ಅನ್ನೋ ವಿಚಾರ ಬದಲಾಯಿತು  . ಇತರ ರಾಜ್ಯದ ಜನರಂತೆ ಮಾತೃ  ಭಾಷೆಗೆ ಗೌರವ ಅನಿಯಮಿತವಾಗಿ ನಶಿಸುತ್ತಿದೆ ಅನ್ನೋದು ಬಹುಬೇಗನೆ ಮನಸಿಗೆ ನಾಟಿತು.
...






 ...
...
...
...

Suddenly ಹಿಂದಿಂದ ಹಾರ್ನ್ ಹೊಡ್ಯೊ ಶಬ್ದ ಕೇಳ್ತು .. ಒಹ್ !! ಸಿಗ್ನಲ್ ಬಿಡ್ತು...flashback ಅಲ್ಲಿ ಸುತ್ ತಾ ಇದ್ದ ನಾನು  ವರ್ತಮಾನಕ್ಕೆ ಅವಾಗ್ಲೇ ಬಂದೆ .. ಎನೋ ಒಂದ್ತರ ಮುಖದಲ್ಲಿ ಕಿರುನಗು  ಬಂತು, LETS GET BACK TO WORK.. ಅಂತ ಮನಸ್ಸು  ಹೇಳ್ತು ........ !!